• English
  • Login / Register
  • ಎಂಜಿ ವಿಂಡ್ಸರ್‌ ಇವಿ ಮುಂಭಾಗ left side image
  • ಎಂಜಿ ವಿಂಡ್ಸರ್‌ ಇವಿ side view (left)  image
1/2
  • MG Windsor EV
    + 27ಚಿತ್ರಗಳು
  • MG Windsor EV
  • MG Windsor EV
    + 4ಬಣ್ಣಗಳು
  • MG Windsor EV

ಎಂಜಿ ವಿಂಡ್ಸರ್‌ ಇವಿ

change car
45 ವಿರ್ಮಶೆಗಳುrate & win ₹1000
Rs.13.50 - 15.50 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಅಕ್ಟೋಬರ್ offer

ಎಂಜಿ ವಿಂಡ್ಸರ್‌ ಇವಿ ನ ಪ್ರಮುಖ ಸ್ಪೆಕ್ಸ್

ರೇಂಜ್331 km
ಪವರ್134 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ38 kwh
ಚಾರ್ಜಿಂಗ್‌ time ಡಿಸಿ55 min-50kw (0-80%)
ಚಾರ್ಜಿಂಗ್‌ time ಎಸಿ6.5 h-7.4kw (0-100%)
ಬೂಟ್‌ನ ಸಾಮರ್ಥ್ಯ604 Litres
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • wireless charger
  • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
  • ಹಿಂಭಾಗದ ಕ್ಯಾಮೆರಾ
  • ಕೀಲಿಕೈ ಇಲ್ಲದ ನಮೂದು
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ರಿಯರ್ ಏಸಿ ವೆಂಟ್ಸ್
  • ಏರ್ ಪ್ಯೂರಿಫೈಯರ್‌
  • voice commands
  • ಕ್ರುಯಸ್ ಕಂಟ್ರೋಲ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • ಪವರ್ ವಿಂಡೋಸ್
  • ಸನ್ರೂಫ್
  • advanced internet ಫೆಅತುರ್ಸ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ವಿಂಡ್ಸರ್‌ ಇವಿ ಇತ್ತೀಚಿನ ಅಪ್ಡೇಟ್

ಎಮ್‌ಜಿ ವಿಂಡ್ಸರ್‌ ಇವಿಯ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ಎಮ್‌ಜಿ ವಿಂಡ್ಸರ್‌ ಇವಿಯು ಮೊದಲ ದಿನದಲ್ಲಿ 15,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಈ ಇವಿಯು ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಮತ್ತು ಬ್ಯಾಟರಿಯನ್ನು ಒಳಗೊಂಡಿರುವ ಸಂಪೂರ್ಣ ಕಾರ್ ಆಗಿ ಲಭ್ಯವಿದೆ. ವಿಂಡ್ಸರ್ ಇವಿಯ ಡೆಲಿವೆರಿಗಳು ಅಕ್ಟೋಬರ್ 12ರಿಂದ ಪ್ರಾರಂಭವಾಗುತ್ತದೆ.

ಎಮ್‌ಜಿ ವಿಂಡ್ಸರ್‌ ಇವಿಯ ಬ್ಯಾಟರಿ ಬಾಡಿಗೆ ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ

ಎಮ್‌ಜಿ ವಿಂಡ್ಸರ್‌ ಬ್ಯಾಟರಿ ಬಾಡಿಗೆ ಕಾರ್ಯಕ್ರಮವು ಸಾಮಾನ್ಯವಾಗಿ ನೀವು, ಗ್ರಾಹಕರಾಗಿ ವಾಹನದ ಬ್ಯಾಟರಿ ಪ್ಯಾಕ್‌ನ ಬಳಕೆಗೆ ಪಾವತಿಸುತ್ತೀರಿ. ಬ್ಯಾಟರಿಯ ಬೆಲೆಯನ್ನು ವಾಹನದ ಬೆಲೆಯಲ್ಲಿ ಸೇರಿಸಲಾಗಿಲ್ಲ ಮತ್ತು ಅದರ ಬಳಕೆಗೆ, ಅಂದರೆ ಪ್ರತಿ ಕಿಮೀಗೆ 3.5 ರೂ.ವರೆಗೆ ನೀವು ಪಾವತಿಸಬೇಕಾಗುತ್ತದೆ. ನೀವು ಕನಿಷ್ಟ 1,500 ಕಿ.ಮೀ.ಗೆ ರೀಚಾರ್ಜ್ ಮಾಡಬೇಕಾಗುತ್ತದೆ.

ಭಾರತದಲ್ಲಿ ಎಮ್‌ಜಿ ವಿಂಡ್ಸರ್ ಇವಿಯ ಬೆಲೆ ಎಷ್ಟು?

ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಎಮ್‌ಜಿ ವಿಂಡ್ಸರ್ ಇವಿಯ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆ 9.99 ಲಕ್ಷ ರೂ.ನಿಂದ ಪ್ರಾರಂಭಿಸುತ್ತದೆ. ಈ ಬೆಲೆಯು ಬ್ಯಾಟರಿ ಪ್ಯಾಕ್ ವೆಚ್ಚವನ್ನು ಒಳಗೊಂಡಿಲ್ಲ ಮತ್ತು ಬ್ಯಾಟರಿ ಚಂದಾದಾರಿಕೆಗಾಗಿ ನೀವು ಪ್ರತಿ ಕಿ.ಮೀಗೆ ರೂ 3.5 ಪಾವತಿಸಬೇಕಾಗುತ್ತದೆ.

ಪರ್ಯಾಯವಾಗಿ, ನೀವು ಬ್ಯಾಟರಿ ಪ್ಯಾಕ್ ಸೇರಿದಂತೆ ಸಂಪೂರ್ಣ ಘಟಕವಾಗಿ EV ಅನ್ನು ಖರೀದಿಸಬಹುದು, ಬೆಲೆಗಳು 13.50 ಲಕ್ಷ ರೂ.ನಿಂದ 15.50 ಲಕ್ಷ ರೂ.ವರೆಗೆ ಇರುತ್ತದೆ.

ಎಲ್ಲಾ ಬೆಲೆಗಳು ಭಾರತದಾದ್ಯಂತದ ಪರಿಚಯಾತ್ಮಕ ಮತ್ತು ಎಕ್ಸ್ ಶೋರೂಂ ಆಗಿದೆ. 

ಎಮ್‌ಜಿ ವಿಂಡ್ಸರ್ ಇವಿಯ ಆಯಾಮಗಳು ಯಾವುವು?

ಎಮ್‌ಜಿ ವಿಂಡ್ಸರ್ ಇವಿಯ ಆಯಾಮಗಳು ಈ ಕೆಳಗಿನಂತಿವೆ:

  • ಉದ್ದ: 4295 ಮಿ.ಮೀ

  • ಅಗಲ: 1850 ಮಿಮೀ

  • ಎತ್ತರ: 1677 ಮಿಮೀ

  • ವೀಲ್‌ಬೇಸ್: 2700 ಮಿಮೀ

  • ಬೂಟ್ ಸ್ಪೇಸ್: 604 ಲೀಟರ್ ವರೆಗೆ

ಎಮ್‌ಜಿ ವಿಂಡ್ಸರ್ ಇವಿಯಲ್ಲಿ ಎಷ್ಟು ಆವೃತ್ತಿಗಳಿವೆ ?

ಎಮ್‌ಜಿ ತನ್ನ ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು ಮೂರು ಆವೃತ್ತಿಗಳಲ್ಲಿ ನೀಡುತ್ತಿದೆ:

  • ಎಕ್ಸೈಟ್

  • ಎಕ್ಸ್‌ಕ್ಲೂಸಿವ್

  • ಎಸೆನ್ಸ್

ಎಮ್‌ಜಿ ವಿಂಡ್ಸರ್ ಇವಿಯ ಸೀಟಿಂಗ್‌ ಸಾಮರ್ಥ್ಯ ಎಷ್ಟು?

ವಿಂಡ್ಸರ್ ಇವಿಯನ್ನು 5-ಸೀಟರ್ ಕಾನ್ಫಿಗರೇಶನ್‌ನಲ್ಲಿ ನೀಡಲಾಗುತ್ತಿದೆ. ವಿಂಡ್ಸರ್ ಇವಿಯ ಹಿಂದಿನ ಸೀಟುಗಳು 135 ಡಿಗ್ರಿಗಳವರೆಗೆ ರಿಕ್ಲೈನ್ ​​ಆಂಗಲ್‌ಅನ್ನು ನೀಡುತ್ತದೆ. 

ಎಮ್‌ಜಿ ವಿಂಡ್ಸರ್ ಇವಿ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ವಿಂಡ್ಸರ್ ಇವಿಯಲ್ಲಿನ ಫೀಚರ್‌ಗಳು 15.6-ಇಂಚಿನ ಟಚ್‌ಸ್ಕ್ರೀನ್ (ಇಂದಿಗೂ ಭಾರತದಲ್ಲಿ ಯಾವುದೇ MG ಕಾರಿನಲ್ಲಿ ನೀಡದೆ ಇರುವ ಅತಿದೊಡ್ಡ ಟಚ್‌ಸ್ಕ್ರೀನ್), 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್‌ ಎಸಿ, ಚಾಲಿತ ಡ್ರೈವರ್ ಸೀಟ್, ಚಾಲಿತ ಟೈಲ್‌ಗೇಟ್ ಮತ್ತು ಪನೋರಮಿಕ್ ಗ್ಲಾಸ್ ರೂಫ್ ಅನ್ನು ಹೊಂದಿದೆ. 

ಎಂಜಿ ವಿಂಡ್ಸರ್ ಇವಿಯ ರೇಂಜ್‌ ಎಷ್ಟು?

ಎಮ್‌ಜಿ ವಿಂಡ್ಸರ್ ಇವಿಯು 136 ಪಿಎಸ್‌ ಮತ್ತು 200 ಎನ್‌ಎಮ್‌ಅನ್ನು ಉತ್ಪಾದಿಸುವ ಏಕೈಕ ಎಲೆಕ್ಟ್ರಿಕ್ ಮೋಟರ್‌ಗೆ 38 ಕಿ.ವ್ಯಾಟ್‌ ಅನ್ನು ಬಳಸುತ್ತದೆ. ಇದು 331 ಕಿಮೀ ವರೆಗಿನ ಡ್ರೈವಿಂಗ್‌ ರೇಂಜ್‌ ಅನ್ನು ನೀಡುತ್ತದೆ. ವಿಂಡ್ಸರ್ ಇವಿಯು ಡಿಸಿ ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ ಮತ್ತು 55 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು.

ಎಂಜಿ ವಿಂಡ್ಸರ್ ಇವಿ ಎಷ್ಟು ಸುರಕ್ಷಿತವಾಗಿದೆ?

ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು (ಎಲ್ಲಾ ಆವೃತ್ತಿಗಳಲ್ಲಿ ಲಭ್ಯವಿದೆ), 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನಿಂದ ನೋಡಿಕೊಳ್ಳಲಾಗುತ್ತದೆ. ಎಮ್‌ಜಿ ವಿಂಡ್ಸರ್ ಇವಿಯನ್ನು ಇನ್ನೂ ಗ್ಲೋಬಲ್ ಅಥವಾ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಮಾಡಿಲ್ಲ.

ಎಷ್ಟು ಬಣ್ಣದ ಆಯ್ಕೆಗಳಿವೆ?

ಗ್ರಾಹಕರು ನಾಲ್ಕು ಬಣ್ಣದ ಆಯ್ಕೆಗಳಲ್ಲಿ ವಿಂಡ್ಸರ್ EV ಅನ್ನು ಆಯ್ಕೆ ಮಾಡಬಹುದು, ಅವುಗಳೆಂದರೆ ಸ್ಟಾರ್‌ಬರ್ಸ್ಟ್ ಬ್ಲ್ಯಾಕ್, ಪರ್ಲ್ ವೈಟ್, ಕ್ಲೇ ಬೀಜ್ ಮತ್ತು ಟರ್ಕೋಯಿಸ್ ಗ್ರೀನ್. 

ನೀವು ಎಂಜಿ ವಿಂಡ್ಸರ್ ಇವಿಯನ್ನು ಖರೀದಿಸಬಹುದೇ ?

ನೀವು ಪ್ರಾಯೋಗಿಕ ಮತ್ತು ಆರಾಮದಾಯಕವಾದ ಇವಿಗಾಗಿ 300 ಕಿಮೀ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ಹುಡುಕುತ್ತಿದ್ದರೆ ನೀವು ಎಮ್‌ಜಿ ವಿಂಡ್ಸರ್‌ ಇವಿಯನ್ನು ಆಯ್ಕೆ ಮಾಡಬಹುದು. ಎಲೆಕ್ಟ್ರಿಕ್ ಕ್ರಾಸ್ಒವರ್ ಪ್ರೀಮಿಯಂ ಫೀಚರ್‌ಗಳೊಂದಿಗೆ ಲೋಡ್ ಆಗುತ್ತದೆ ಮತ್ತು ಉತ್ತಮ ಸುರಕ್ಷತಾ ಪ್ಯಾಕೇಜ್‌ ಅನ್ನು ನೀಡುತ್ತದೆ.

ನನ್ನ ಪ್ರತಿಸ್ಪರ್ಧಿಗಳು ಯಾವುವು?

 ವಿಂಡ್ಸರ್ ಇವಿಯನ್ನು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಇವಿಗೆ ಕ್ರಾಸ್ಒವರ್ ಪರ್ಯಾಯವಾಗಿ ಪರಿಗಣಿಸಬಹುದು. ಅದರ ಬೆಲೆ ಮತ್ತು ಚಾಲನಾ ರೇಂಜ್‌ ಅನ್ನು ಪರಿಗಣಿಸಿ, ಇದನ್ನು ಟಾಟಾ ಪಂಚ್ ಇವಿಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಬಹುದು.

ಮತ್ತಷ್ಟು ಓದು
ವಿಂಡ್ಸರ್‌ ಇವಿ ಎಕ್ಸೈಟ್(ಬೇಸ್ ಮಾಡೆಲ್)38 kwh, 331 km, 134 ಬಿಹೆಚ್ ಪಿRs.13.50 ಲಕ್ಷ*
ವಿಂಡ್ಸರ್‌ ಇವಿ ಎಕ್ಸ್ಕ್ಲೂಸಿವ್38 kwh, 331 km, 134 ಬಿಹೆಚ್ ಪಿRs.14.50 ಲಕ್ಷ*
ವಿಂಡ್ಸರ್‌ ಇವಿ essence(ಟಾಪ್‌ ಮೊಡೆಲ್‌)
ಅಗ್ರ ಮಾರಾಟ
38 kwh, 331 km, 134 ಬಿಹೆಚ್ ಪಿ
Rs.15.50 ಲಕ್ಷ*

ಎಂಜಿ ವಿಂಡ್ಸರ್‌ ಇವಿ comparison with similar cars

ಎಂಜಿ ವಿಂಡ್ಸರ್‌ ಇವಿ
ಎಂಜಿ ವಿಂಡ್ಸರ್‌ ಇವಿ
Rs.13.50 - 15.50 ಲಕ್ಷ*
4.745 ವಿರ್ಮಶೆಗಳು
ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
4.4144 ವಿರ್ಮಶೆಗಳು
ಟಾಟಾ ಪಂಚ್‌ ಇವಿ
ಟಾಟಾ ಪಂಚ್‌ ಇವಿ
Rs.9.99 - 14.29 ಲಕ್ಷ*
4.488 ವಿರ್ಮಶೆಗಳು
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ
Rs.11 - 20.30 ಲಕ್ಷ*
4.6269 ವಿರ್ಮಶೆಗಳು
ಎಂಜಿ ಕಾಮೆಟ್ ಇವಿ
ಎಂಜಿ ಕಾಮೆಟ್ ಇವಿ
Rs.7 - 9.65 ಲಕ್ಷ*
4.3195 ವಿರ್ಮಶೆಗಳು
ಸಿಟ್ರೊಯೆನ್ ಇಸಿ3
ಸಿಟ್ರೊಯೆನ್ ಇಸಿ3
Rs.11.61 - 13.41 ಲಕ್ಷ*
4.283 ವಿರ್ಮಶೆಗಳು
ಮಹೀಂದ್ರ XUV400 EV
ಮಹೀಂದ್ರ XUV400 EV
Rs.15.49 - 19.39 ಲಕ್ಷ*
4.5250 ವಿರ್ಮಶೆಗಳು
ಟಾಟಾ ಟಿಗೊರ್ ಇವಿ
ಟಾಟಾ ಟಿಗೊರ್ ಇವಿ
Rs.12.49 - 13.75 ಲಕ್ಷ*
4.194 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Battery Capacity38 kWhBattery Capacity40.5 - 46.08 kWhBattery Capacity25 - 35 kWhBattery CapacityNot ApplicableBattery Capacity17.3 kWhBattery Capacity29.2 kWhBattery Capacity34.5 - 39.4 kWhBattery Capacity26 kWh
Range331 kmRange390 - 489 kmRange315 - 421 kmRangeNot ApplicableRange230 kmRange320 kmRange375 - 456 kmRange315 km
Charging Time55 Min-DC-50kW (0-80%)Charging Time56Min-(10-80%)-50kWCharging Time56 Min-50 kW(10-80%)Charging TimeNot ApplicableCharging Time3.3KW 7H (0-100%)Charging Time57minCharging Time6 H 30 Min-AC-7.2 kW (0-100%)Charging Time59 min| DC-18 kW(10-80%)
Power134 ಬಿಹೆಚ್ ಪಿPower127 - 148 ಬಿಹೆಚ್ ಪಿPower80.46 - 120.69 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower41.42 ಬಿಹೆಚ್ ಪಿPower56.21 ಬಿಹೆಚ್ ಪಿPower147.51 - 149.55 ಬಿಹೆಚ್ ಪಿPower73.75 ಬಿಹೆಚ್ ಪಿ
Airbags6Airbags6Airbags6Airbags6Airbags2Airbags2Airbags2-6Airbags2
Currently Viewingವಿಂಡ್ಸರ್‌ ಇವಿ vs ನೆಕ್ಸಾನ್ ಇವಿವಿಂಡ್ಸರ್‌ ಇವಿ vs ಪಂಚ್‌ ಇವಿವಿಂಡ್ಸರ್‌ ಇವಿ vs ಕ್ರೆಟಾವಿಂಡ್ಸರ್‌ ಇವಿ vs ಕಾಮೆಟ್ ಇವಿವಿಂಡ್ಸರ್‌ ಇವಿ vs ಇಸಿ3ವಿಂಡ್ಸರ್‌ ಇವಿ vs XUV400 EVವಿಂಡ್ಸರ್‌ ಇವಿ vs ಟಿಗೊರ್ ಇವಿ

ಎಂಜಿ ವಿಂಡ್ಸರ್‌ ಇವಿ ವಿಮರ್ಶೆ

CarDekho Experts
ವಿಂಡ್ಸರ್ ಇವಿಯು ಒಂದು ಅತ್ಯುತ್ತಮ ಕುಟುಂಬ ಕಾರ್ ಆಗಿದ್ದು, ಇದು ನಮ್ಮನ್ನು ನಿರಾಶೆಗೊಳಿಸುವ ಸಾಧ್ಯತೆಯಿಲ್ಲ. ನೀವು ಟಚ್‌ಸ್ಕ್ರೀನ್ ಕಂಟ್ರೋಲ್‌ಗಳು ಮತ್ತು ಸೀಮಿತ ರೇಂಜ್‌ಗೆ ಹೊಂದಿಕೊಳ್ಳಲು ಸಾಧ್ಯವಾದರೆ, ರೂ 20 ಲಕ್ಷದೊಳಗೆ ಇದಕ್ಕಿಂತ ಉತ್ತಮ ಇವಿಯನ್ನು ಕುಡುಕುವುದು ಕಷ್ಟ."

overview

ಎಮ್‌ಜಿ ವಿಂಡ್ಸರ್ ಇವಿಯು ಭಾರತಕ್ಕೆ ನಿಜವಾದ ವಿಶಿಷ್ಟವಾದ ಇವಿ ಆಗಿದೆ, ಕುಟುಂಬಗಳಿಗೆ ಬಜೆಟ್ ವಿಭಾಗದಲ್ಲಿ ಮೊದಲ ಬಾರಿಗೆ ಇದರ ಉದ್ದೇಶದಂತೆ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲಾಗಿದೆ. ಇದು ಅದರ ವಿಶಿಷ್ಟ ವಿನ್ಯಾಸ, ಚಮತ್ಕಾರಿ ಮತ್ತು ಪ್ರಾಯೋಗಿಕ ಕ್ಯಾಬಿನ್ ಮತ್ತು ಸಾಕಷ್ಟು ಸ್ಥಳವನ್ನು ಒಳಗೊಂಡಿರುವ ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ. ಗಾತ್ರದಲ್ಲಿ ಹ್ಯುಂಡೈ ಕ್ರೆಟಾದಂತೆಯೇ ಇದ್ದರೂ, ಇದು ಟಾಟಾ ಹ್ಯಾರಿಯರ್‌ಗಿಂತ ಹೆಚ್ಚಿನ ಸ್ಥಳಾವಕಾಶವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಈ ಕಾರನ್ನು ಖರೀದಿಸುವಾಗ, ನೀವು ಬ್ಯಾಟರಿಗಾಗಿ ಮುಂಗಡವಾಗಿ ಪಾವತಿಸುವ ಅಗತ್ಯವಿಲ್ಲ. ಆದರೆ ನಾವು ಅದನ್ನು ನಂತರ ಪಾವತಿಸುತ್ತೇವೆ. ಮೊದಲಿಗೆ, ಈ ಕಾರು ನಿಮ್ಮ ಕುಟುಂಬಕ್ಕೆ ಸೂಕ್ತವಾಗಿದೆಯೇ ಎಂದು ನಿರ್ಧರಿಸುವ ಮೂಲಕ ಪ್ರಾರಂಭಿಸೋಣ.

ಎಕ್ಸ್‌ಟೀರಿಯರ್

ವಿಂಡ್ಸರ್ ಅನ್ನು ಮೊದಲಿನಿಂದಲೂ ಎಲೆಕ್ಟ್ರಿಕ್ ವಾಹನವಾಗಿ ಕಲ್ಪಿಸಲಾಗಿತ್ತು, ಆದ್ದರಿಂದ ಇದರಲ್ಲಿ ಎಂಜಿನ್‌ಗೆ ಸ್ಥಳಾವಕಾಶದ ಅಗತ್ಯವಿರುವುದಿಲ್ಲ. ಪರಿಣಾಮವಾಗಿ, ಇದು ಏರೋಡೈನಾಮಿಕ್ ಆಕಾರವನ್ನು ಹೊಂದಿದೆ, ಅದು ಬದಿಯಿಂದ ಮೊಟ್ಟೆಯಂತೆ ಕಾಣುತ್ತದೆ. ಅದರ ಕಾಂಪ್ಯಾಕ್ಟ್ ಗಾತ್ರದ ಜೊತೆಗೆ, ಇದು ಮುದ್ದಾದ ನೋಟವನ್ನು ಹೊಂದಿದೆ. ಇದರಲ್ಲಿ ಪ್ರೀಮಿಯಂ ಫೀಚರ್‌ಗಳ ಕೊರತೆಯೂ ಇಲ್ಲ. ಮುಂಭಾಗವು ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಹೊಂದಿದೆ. ಮತ್ತು ಆದುದರಿಂದ ಪ್ರಕಾಶಿತ MG ಲೋಗೋವನ್ನು ರಾತ್ರಿಯಲ್ಲಿ ಹೈಲೈಟ್ ಮಾಡಲಾಗುತ್ತದೆ. ಮುಂಭಾಗದಲ್ಲಿ, ಕ್ರೋಮ್ ಎಕ್ಸೆಂಟ್‌ಗಳೊಂದಿಗೆ ಹೊಳಪು ಕಪ್ಪು ಪ್ಯಾನಲ್‌ ಇದೆ, ಕಾರಿಗೆ ಅತ್ಯುತ್ತಮವಾದ ಲುಕ್‌ ಅನ್ನು ನೀಡುತ್ತದೆ.

ಬದಿಯಿಂದ ಗಮನಿಸುವಾಗ, ನೀವು 18-ಇಂಚಿನ ಅಲಾಯ್‌ ವೀಲ್‌ಗಳನ್ನು ಕ್ಲೀನ್, ಕಡಿಮೆ ವಿನ್ಯಾಸದೊಂದಿಗೆ ಗಮನಿಸಬಹುದು, ಇದು ನನಗೆ ವಿಶೇಷವಾಗಿ ಆಕರ್ಷಕವಾಗಿದೆ. ಕಾರಿನ ಸರಳ ಮತ್ತು ಅತ್ಯಾಧುನಿಕ ವಿನ್ಯಾಸವನ್ನು ಹೆಚ್ಚಿಸುವ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಸಹ ನೀವು ನೋಡುತ್ತೀರಿ. ರೂಫ್‌ ರೇಲ್ಸ್‌ಗಳನ್ನು ಅಚ್ಚುಕಟ್ಟಾಗಿ ಸಂಯೋಜಿಸಲಾಗಿದೆ, ಅದರ ಎತ್ತರವನ್ನು ಹೆಚ್ಚಿಸುತ್ತದೆ. ಸಂಪೂರ್ಣ ಸೈಡ್ ಪ್ರೊಫೈಲ್ ಅನ್ನು ನೋಡಿದಾಗ, ಮೊಟ್ಟೆಯಂತಹ ಆಕಾರದ ಮೂಲವನ್ನು ನೀವು ನೋಡುತ್ತೀರಿ.

ಹಿಂಭಾಗದಿಂದ ಗಮನಿಸುವಾಗ, ವಿಂಡ್ಸರ್ ಬಾಗಿದ ಹಾಗೆ ಮತ್ತು ಮೋಹಕವಾಗಿ ಕಾಣುತ್ತದೆ, ಇಲ್ಲಿಯೂ ಪ್ರೀಮಿಯಂ ಫೀಚರ್‌ಗಳಿವೆ. ಪ್ರಭಾವಶಾಲಿ ಅಂಶಗಳೊಂದಿಗೆ ನೀವು ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತೀರಿ. ಆದಾಗ್ಯೂ, ಒಂದು ಎದ್ದುಕಾಣುವ ಲೋಪವೆಂದರೆ ಹಿಂಭಾಗದ ವೈಪರ್ ಅಥವಾ ವಾಷರ್‌ನ ಕೊರತೆ, ಟಾಪ್‌-ಎಂಡ್‌ ಆವೃತ್ತಿಗಳಲ್ಲಿಯೂ ಸಹ ಇದು ಲಭ್ಯವಿಲ್ಲ, ಆದರೆ ಇದು ಎಲ್ಲಾ ಆವೃತ್ತಿಗಳಲ್ಲಿ ಇರಬೇಕಾದ ಫೀಚರ್‌ ಆಗಿದೆ. ಒಟ್ಟಾರೆಯಾಗಿ, ವಿಂಡ್ಸರ್‌ನ ರೋಡ್‌ ಪ್ರೆಸೆನ್ಸ್‌ ಎಸ್‌ಯುವಿಯಷ್ಟು ಕಮಾಂಡಿಂಗ್ ಆಗಿಲ್ಲ, ಆದರೆ ಇದು ತನ್ನ ವಿಶಿಷ್ಟ ವಿನ್ಯಾಸದೊಂದಿಗೆ ಎದ್ದು ಕಾಣುತ್ತದೆ ಮತ್ತು ಸಲೀಸಾಗಿ ಗಮನ ಸೆಳೆಯುತ್ತದೆ. ಇದು ರಸ್ತೆಯ ಮೇಲೆ ಆಕರ್ಷಕ ಪ್ರೆಸೆನ್ಸ್‌ ಅನ್ನು ಹೊಂದಿದೆ ಮತ್ತು ಜನರು ಖಂಡಿತವಾಗಿಯೂ ಅದನ್ನು ನೋಡಲು ಒಮ್ಮೆ ತಿರುಗುತ್ತಾರೆ.

ಇಂಟೀರಿಯರ್

ವಿಂಡ್ಸರ್ ನಯವಾದ, ಪ್ರೀಮಿಯಂ-ಫೀಲಿಂಗ್ ಕೀಲಿಯೊಂದಿಗೆ ಬರುತ್ತದೆ. ಕಾರನ್ನು ಅನ್ಲಾಕ್ ಮಾಡಲು, ಬಟನ್ ಅನ್ನು ಒತ್ತುವ ಅಗತ್ಯವಿಲ್ಲ. ನಿಮ್ಮ ಬಳಿ ಇರುವ ಕೀಲಿಯೊಂದಿಗೆ ಬಾಗಿಲನ್ನು ಸಮೀಪಿಸಿ, ಮತ್ತು ಕಾರು ಆಟೋಮ್ಯಾಟಿಕ್‌ ಆಗಿ ಅನ್ಲಾಕ್ ಆಗುತ್ತದೆ. ಅಂತೆಯೇ, ಅದನ್ನು ಲಾಕ್ ಮಾಡಲು, ಬಾಗಿಲು ಮುಚ್ಚಿದ ನಂತರ ಸ್ವಲ್ಪ ದೂರ ತೆರಳಿ ಮತ್ತು ಕಾರು ಸ್ವತಃ ಲಾಕ್ ಆಗುತ್ತದೆ. ಯಾವುದೇ ಪುಶ್-ಬಟನ್ ಸ್ಟಾರ್ಟ್ ಕೂಡ ಇಲ್ಲ. ಒಳಗೆ ಪ್ರವೇಶಿಸಿದ ಮೇಲೆ, ನೀವು ಮಾಡಬೇಕಾಗಿರುವುದು ಬ್ರೇಕ್ ಮೇಲೆ ಕಾಲನ್ನು ಇಡಬೇಕು, ಮತ್ತು ಕಾರು ಆಟೋಮ್ಯಾಟಿಕ್‌ ಆಗಿ  ಸ್ಟಾರ್ಟ್‌ ಆಗುತ್ತದೆ, ಹಾಗೆಯೇ ಇದು ಚಾಲನೆ ಮಾಡಲು ಸಿದ್ಧವಾಗಿದೆ.

ಈಗ, ನಾವು ಇಂಟಿರಿಯರ್‌ ಅನ್ನು , ಇದು ಪ್ರೀಮಿಯಂ ಮತ್ತು ಉನ್ನತ ಮಟ್ಟದ ವೈಬ್ ಅನ್ನು ಹೊರಹಾಕುತ್ತದೆ. ಕ್ಯಾಬಿನ್ ಗುಲಾಬಿ ಚಿನ್ನದ ಎಕ್ಸೆಂಟ್‌ಗಳೊಂದಿಗೆ ವ್ಯತಿರಿಕ್ತವಾದ ಡಾರ್ಕ್ ವುಡ್ ಫಿನಿಶ್ ಅನ್ನು ಹೊಂದಿದೆ, ಜೊತೆಗೆ ಮೇಲಿನ ಡ್ಯಾಶ್‌ಬೋರ್ಡ್‌ನಲ್ಲಿ ಸಾಫ್ಟ್‌-ಟಚ್ ಮೆಟಿರಿಯಲ್‌ಗಳನ್ನು ಹೊಂದಿದೆ, ಇದು ಅದರ ಐಷಾರಾಮಿ ಅನುಭವವನ್ನು ನೀಡುತ್ತದೆ. ಕಪ್ಪು ಮತ್ತು ಗುಲಾಬಿ ಚಿನ್ನದ ಸಂಯೋಜನೆಯು ಸೊಗಸಾದ ಭಾಸವಾಗುತ್ತದೆ.

ಈ ಥೀಮ್ ಡೋರ್ ಪ್ಯಾನೆಲ್‌ಗಳಲ್ಲಿ ಮುಂದುವರಿಯುತ್ತದೆ ಮತ್ತು ಸ್ಪೀಕರ್ ಗ್ರಿಲ್‌ಗಳು ಐಷಾರಾಮಿ ವಾಹನಗಳಿಂದ ಪ್ರೇರಿತವಾಗಿದೆ. ಹಾಗೆಯೇ ಇದು ಕೇವಲ ವಿನ್ಯಾಸದ ಅಂಶವಾಗಿದೆ ಮತ್ತು ನಿಜವಾದ ಸ್ಪೀಕರ್ ಅಲ್ಲ. ಸೂಕ್ಷ್ಮವಾದ ಎಂಬಿಯೆಂಟ್‌ ಲೈಟಿಂಗ್‌ ಇಂಟಿರಿಯರ್‌ನ ಕ್ಲಾಸಿ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಒಟ್ಟಾರೆ ವಿನ್ಯಾಸವು, ವಿಶೇಷವಾಗಿ ಸಜ್ಜುಗೊಳಿಸುವಿಕೆಯೊಂದಿಗೆ, ವಿಶಿಷ್ಟವಾದ ಕಾರ್ ಇಂಟಿರಿಯರ್‌ಗಿಂತ ಹೆಚ್ಚು ಟಾಪ್‌-ಎಂಡ್‌ನ ಲೌಂಜ್‌ನಂತೆ ಭಾಸವಾಗುತ್ತದೆ.

ಇಲ್ಲಿ ಬಳಸಿದ ಮೆಟಿರಿಯಲ್‌ಗಳ ಸ್ವಲ್ಪ ಹಗುರವಾಗಿದ್ದರೂ ಉತ್ತಮ ಫಿನಿಶ್‌ ಅನ್ನು ಹೊಂದಿವೆ. ಉದಾಹರಣೆಗೆ, ಸೆಂಟರ್ ಟ್ರೇ ಮತ್ತು ಬಾಗಿಲಿನ ಹಿಡಿಕೆಗಳು ಸ್ವಲ್ಪ ಹಗುರವಾಗಿರುತ್ತವೆ, ಏಕೆಂದರೆ ಅವುಗಳು ಭಾರವಾದ ಮೆಟಲ್‌ಗಳು ಅಥವಾ ಸಾಲಿಡ್‌ ಪ್ಲಾಸ್ಟಿಕ್‌ಗಳಿಂದ ಮಾಡಲ್ಪಟ್ಟಿಲ್ಲ. ಹಾಗೆಯೇ, ಇದರ ಅತ್ಯುತ್ತಮ ಫಿನಿಶ್‌ ಇದಕ್ಕೆ ಪ್ರೀಮಿಯಂ ನೋಟವನ್ನು ನೀಡುತ್ತದೆ.

ಕಂಟ್ರೋಲ್‌ಗಳು - ಸ್ಟೀರಿಂಗ್

ನಾನು ಮೊದಲೇ ಹೇಳಿದಂತೆ, ಇದು ಕನಿಷ್ಠ ಕ್ಯಾಬಿನ್ ಆಗಿದೆ, ಆದ್ದರಿಂದ ಕೆಲವೇ ಕೆಲವು ಬಟನ್‌ ಕಂಟ್ರೋಲ್‌ಗಳಿವೆ. ಎಲ್ಲಾ ಹವಾನಿಯಂತ್ರಣ ನಿಯಂತ್ರಣಗಳಿಗಾಗಿ ನೀವು ಮಧ್ಯದಲ್ಲಿ ಒಂದೇ ಸಾಲನ್ನು ಹೊಂದಿದ್ದೀರಿ, ಇದು ಸಾಕಷ್ಟು ಸೂಕ್ತವಾಗಿದೆ. ಅದನ್ನು ಹೊರತುಪಡಿಸಿ, ಬಹುತೇಕ ಎಲ್ಲವನ್ನೂ ಟಚ್‌ಸ್ಕ್ರೀನ್ ಮೂಲಕ ನಿಯಂತ್ರಿಸಲಾಗುತ್ತದೆ, ಕೆಲವು ಫಂಕ್ಷನ್‌ಗಳನ್ನು ಸ್ಟೀರಿಂಗ್‌ನ ಮೂಲಕ ನಿರ್ವಹಿಸಲಾಗುತ್ತದೆ. ಅದರ ಬಗ್ಗೆ ವಿವರವಾಗಿ ತಿಳಿಯೋಣ. 

 

ಸ್ಟೀರಿಂಗ್ ಚಕ್ರದ  ಬಲ ಭಾಗದಲ್ಲಿರುವ ಟಾಗಲ್‌ಗಳು ನಿಮ್ಮ ಮೀಡಿಯಾವನ್ನು ನಿರ್ವಹಿಸುತ್ತದೆ. ಅದನ್ನು ಮೇಲಕ್ಕೆ ಪ್ರೆಸ್‌ ಮಾಡಿದರೆ ಸೌಂಡ್‌ ಅನ್ನು ಹೆಚ್ಚಿಸುತ್ತದೆ, ಆದರೆ ಅದನ್ನು ಕೆಳಗೆ ಮಾಡಿದರೆ ಅದು ಕಡಿಮೆಯಾಗುತ್ತದೆ. ಎಡ ಅಥವಾ ಬಲ ಒತ್ತುವುದರಿಂದ ಮೀಡಿಯಾದ ಟ್ರ್ಯಾಕ್ ಬದಲಾಗುತ್ತದೆ. ನೀವು ಟಾಗಲ್ ಅನ್ನು ಒತ್ತಿ ಮತ್ತು ಹಿಡಿದಿಟ್ಟುಕೊಂಡರೆ, ಅದು ನಿಮ್ಮ MID ಯಲ್ಲಿನ ಮೆನು ಮೂಲಕ ಸ್ಕ್ರಾಲ್ ಮಾಡಲು ಅನುಮತಿಸುತ್ತದೆ. ಈಗ, ಅದರ ಎಡ ಟಾಗಲ್ ಅನ್ನು ಚರ್ಚಿಸೋಣ. ಆರಂಭದಲ್ಲಿ, ಇದು ಬಲಭಾಗದ ORVM (ಔಟ್‌ಸೈಡ್‌ ರಿಯರ್‌ ವ್ಯೂ ಮಿರರ್‌) ಅನ್ನು ನಿಯಂತ್ರಿಸುತ್ತದೆ. ನೀವು ಎಡಭಾಗ ORVM ಅನ್ನು ಸರಿಹೊಂದಿಸಲು ಬಯಸಿದರೆ, ಅದನ್ನು ದೀರ್ಘವಾಗಿ ಒತ್ತಿರಿ ಮತ್ತು ನಿಯಂತ್ರಣವು ಎಡ ORVM ಗೆ ಬದಲಾಗುತ್ತದೆ. ನೀವು ಅದನ್ನು ಮತ್ತೆ ದೀರ್ಘವಾಗಿ ಒತ್ತಿದರೆ, ಅದು AC ಸೆಟ್ಟಿಂಗ್‌ಗಳನ್ನು ಎಡ್ಜಸ್ಟ್‌ ಮಾಡಬಹುದು. ಟಾಗಲ್ ಅನ್ನು ಮೇಲಕ್ಕೆ ಅಥವಾ ಕೆಳಕ್ಕೆ ತಿರುಗಿಸುವುದು ತಾಪಮಾನವನ್ನು ಬದಲಾಯಿಸುತ್ತದೆ, ಆದರೆ ಎಡಕ್ಕೆ ಅಥವಾ ಬಲಕ್ಕೆ ತಿರುಗಿಸುವುದು ಫ್ಯಾನ್ ವೇಗವನ್ನು ಸರಿಹೊಂದಿಸುತ್ತದೆ. ಚಾಲನೆ ಮಾಡುವಾಗ, ಟಾಗಲ್‌ನ ಯಾವ ಸೆಟ್ಟಿಂಗ್ ಆನ್ ಆಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.

ಈಗ ಸ್ವಿಚ್‌ಗೇರ್ ಕಂಟ್ರೋಲ್‌ಗಳನ್ನು ಗಮನಿಸೋಣ. ಬಲ ಸ್ವಿಚ್‌ಗಿಯರ್ ನಿಮ್ಮ ವೈಪರ್‌ಗಳು ಮತ್ತು ಇಂಡಿಕೇಟರ್‌ಗಳನ್ನು ನಿರ್ವಹಿಸುತ್ತದೆ, ಆದರೆ ಎಡಭಾಗವು ನಿಮ್ಮ ಡ್ರೈವಿಂಗ್ ಮೋಡ್‌ಗಳಾದ ಡ್ರೈವ್, ನ್ಯೂಟ್ರಲ್, ರಿವರ್ಸ್ ಮತ್ತು ಪಾರ್ಕ್ ಅನ್ನು ನಿರ್ವಹಿಸುತ್ತದೆ. ಈ ನಿಯಂತ್ರಣವನ್ನು ಬಳಸಿಕೊಂಡು ನೀವು ವೇಗ ಮಿತಿಯನ್ನು ಸಹ ಹೊಂದಿಸಬಹುದು. ಹೆಚ್ಚುವರಿಯಾಗಿ, ಕೆಳಗಿನ ಬಟನ್ ಅನ್ನು ಫೆವರಿಟ್‌ಗಳಾಗಿ ಹೊಂದಿಸಬಹುದು, ಪ್ರಸ್ತುತ ಡ್ರೈವ್ ಮೋಡ್‌ಗಾಗಿ ಕಾನ್ಫಿಗರ್ ಮಾಡಲಾಗಿದೆ, ಆದರೂ ನೀವು ಮೀಡಿಯಾವನ್ನು ಮ್ಯೂಟ್ ಮಾಡುವುದು, ಐ-ಕಾಲ್ ಅನ್ನು ಸಕ್ರಿಯಗೊಳಿಸುವುದು ಅಥವಾ ವಾಹನ ಸೆಟ್ಟಿಂಗ್‌ಗಳನ್ನು ಪ್ರವೇಶಿಸುವಂತಹ ಇತರ ಫಂಕ್ಷನ್‌ಗಳನ್ನು ನಿಯಂತ್ರಿಸಲು ಸೆಟ್ಟಿಂಗ್‌ಗಳಲ್ಲಿ ಅದನ್ನು ಕಸ್ಟಮೈಸ್ ಮಾಡಬಹುದು.

ಕಂಟ್ರೋಲ್‌ಗಳು - ಟಚ್‌ಸ್ಕ್ರೀನ್‌

ಮುಂದೆ, ಟಚ್‌ಸ್ಕ್ರೀನ್ ಕಂಟ್ರೋಲ್‌ಗಳನ್ನು ನೋಡೋಣ. ಮೊದಲೇ ಹೇಳಿದಂತೆ, ನೀವು ಇಲ್ಲಿ ನೆಚ್ಚಿನ ಆಯ್ಕೆಯನ್ನು ಹೊಂದಿಸಬಹುದು. ನೀವು ಡ್ರೈವ್ ಮೋಡ್ ಅನ್ನು ಬದಲಾಯಿಸಲು ಬಯಸಿದರೆ, ಅದನ್ನು ಈ ಇಂಟರ್ಫೇಸ್ ಮೂಲಕ ಮಾಡಬಹುದು. ಇಲ್ಲಿಂದ ರೀಜೆನ್ ಸೆಟ್ಟಿಂಗ್‌ಗಳನ್ನು ಸಹ ಸರಿಹೊಂದಿಸಬಹುದು. ಕ್ಲೈಮೇಟ್‌ ಕಂಟ್ರೋಲ್‌ ಸೆಟ್ಟಿಂಗ್‌ಗಾಗಿ ಬಟನ್‌ ಟಾಗಲ್ ಅನ್ನು ಬಳಸದಿರಲು ನೀವು ಬಯಸಿದಲ್ಲಿ, ಈ ಸ್ಕ್ರೀನ್‌ನ ಮೂಲಕ ಸಹ ನಿಯಂತ್ರಿಸಬಹುದು. ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ ಇಬ್ಬರಿಗೂ ವೆಂಟಿಲೇಟೆಡ್ ಸೀಟ್ ಆಯ್ಕೆಗಳನ್ನು ಇಲ್ಲಿಯೂ ನಿಯಂತ್ರಿಸಲಾಗುತ್ತದೆ. ಒಆರ್‌ವಿಎಮ್‌ ಎಡ್ಜಸ್ಟ್‌ಮೆಂಟ್‌ಗಳನ್ನು ಟಚ್‌ಸ್ಕ್ರೀನ್ ಮೂಲಕ ನೇರವಾಗಿ ಮಾಡಬಹುದು. ಆಟೋ ಮತ್ತು ಲೋ ಬೀಮ್ ಸೇರಿದಂತೆ ಹೆಡ್‌ಲ್ಯಾಂಪ್ ಸೆಟ್ಟಿಂಗ್‌ಗಳನ್ನು ಇಲ್ಲಿಂದ ನಿರ್ವಹಿಸಬಹುದು ಮತ್ತು ನೀವು ಹೆಡ್‌ಲ್ಯಾಂಪ್ ಲೆವೆಲಿಂಗ್ ಅನ್ನು ಸರಿಹೊಂದಿಸಬಹುದು ಮತ್ತು ಹಿಂಭಾಗದ ಫಾಗ್‌ಲ್ಯಾಂಪ್‌ಗಳನ್ನು ಸಕ್ರಿಯಗೊಳಿಸಬಹುದು.

ಮುಂದೆ, ನಿಮ್ಮ JioSaavn ಮೀಡಿಯಾ ಸೆಟ್ಟಿಂಗ್‌ಗಳಿಗೆ ನೀವು ಪ್ರವೇಶವನ್ನು ಹೊಂದಿರುವಿರಿ. ಹೆಚ್ಚುವರಿಯಾಗಿ ಇಲ್ಲಿಂದ ಆಟೋ ಹೋಲ್ಡ್‌ ಅನ್ನು ಸಕ್ರಿಯಗೊಳಿಸುವ ಅಥವಾ ನಿಷ್ಕ್ರಿಯಗೊಳಿಸುವ ಸಾಮರ್ಥ್ಯದ ಫೀಚರ್‌ಗಳು ಒಳಗೊಂಡಿವೆ. ನೀವು ಸ್ಥಿರತೆಯ ಕಂಟ್ರೋಲ್‌ ಅನ್ನು ಆನ್ ಅಥವಾ ಆಫ್ ಮಾಡಬಹುದು, ORVM ಗಳನ್ನು ಮಡಚಬಹುದು ಅಥವಾ ಓಪನ್‌ ಮಾಡಬಹುದು ಮತ್ತು ವಿಂಡೋಗಳನ್ನು ಲಾಕ್ ಮಾಡಬಹುದು ಅಥವಾ ಅನ್ಲಾಕ್ ಮಾಡಬಹುದು-ಈ ಎಲ್ಲಾ ಕಂಟ್ರೋಲ್‌ಗಳನ್ನು ಸ್ಕ್ರೀನ್‌ನ ಎಡಭಾಗದಲ್ಲಿ ಅನುಕೂಲಕರವಾಗಿ ಇರಿಸಲಾಗುತ್ತದೆ. ಬಲಭಾಗದಲ್ಲಿ, ನೀವು ಸನ್‌ಶೇಡ್ ಕಂಟ್ರೋಲ್‌ಗಳನ್ನು ಕಾಣುತ್ತೀರಿ. ನೀವು ಸನ್‌ಶೇಡ್ ಅನ್ನು ತೆರೆಯಲು ಅಥವಾ ಮುಚ್ಚಲು ಬಯಸಿದರೆ, ಇದನ್ನು ಈ ಸ್ಕ್ರೀನ್‌ನಿಂದ ನೇರವಾಗಿ ಮಾಡಬಹುದು, ಇದು ಒಂದೇ ಆಜ್ಞೆಯಲ್ಲಿ ಬಹು ಕ್ರಿಯೆಗಳನ್ನು ಕ್ರೋಢೀಕರಿಸುವುದರಿಂದ ಇದು ತುಂಬಾ ಅನುಕೂಲಕರ ವೈಶಿಷ್ಟ್ಯವಾಗಿದೆ. ನೀವು ಟಚ್‌ಸ್ಕ್ರೀನ್‌ನಿಂದ ಮೀಡಿಯಾ ವಾಲ್ಯೂಮ್, ಫೋನ್ ವಾಲ್ಯೂಮ್ ಮತ್ತು ಸ್ಕ್ರೀನ್ ಬ್ರೈಟ್‌ನೆಸ್ ಅನ್ನು ಸಹ ಸರಿಹೊಂದಿಸಬಹುದು.

ವಿಶಿಷ್ಟವಾಗಿ, ಈ ಫಂಕ್ಷನ್‌ಗಳಿಗಾಗಿ ಕಾರುಗಳು ಬಟನ್‌ಗಳನ್ನು ಹೊಂದಿವೆ, ಮತ್ತು ಪ್ರಾಮಾಣಿಕವಾಗಿ, ಬಟನ್‌ಗಳು ಬಳಸಲು ಹೆಚ್ಚು ಅನುಕೂಲಕರವಾಗಿದೆ. ಅದಲ್ಲದೆ, ವಿನ್ಯಾಸವು ಬಟನ್‌ಗಳಿಗೆ ಸ್ಥಳಾವಕಾಶವನ್ನು ಅನುಮತಿಸದ ಕಾರಣ, ಎಲ್ಲವನ್ನೂ ಟಚ್‌ಸ್ಕ್ರೀನ್‌ಗೆ ಸಂಯೋಜಿಸಲಾಗಿದೆ. ಚಾಲನೆ ಮಾಡುವಾಗ, ಟಚ್‌ಸ್ಕ್ರೀನ್ ಅನ್ನು ಬಳಸುವುದಕ್ಕೆ ಹೆಚ್ಚಿನ ಗಮನ ಮತ್ತು ಪ್ರಯತ್ನದ ಅಗತ್ಯವಿರುತ್ತದೆ, ಆದ್ದರಿಂದ ಇದು ಅಭ್ಯಾಸವಾಗಲು ಸ್ವಲ್ಪಮಟ್ಟಿಗೆ ಸಮಯವನ್ನು ತೆಗೆದುಕೊಳ್ಳುತ್ತದೆ. ವಾಯ್ಸ್‌ ಕಮಾಂಡ್‌ಗಳು ಲಭ್ಯವಿದ್ದರೂ, ಎಸಿಯನ್ನು ನಿಯಂತ್ರಿಸುವಂತಹ ಕೆಲವು ಫಂಕ್ಷನ್‌ಗಳಿಗೆ ಅವು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ವಾಯ್ಸ್‌ ಕಮಾಂಡ್‌ ಎಲ್ಲದರಲ್ಲೂ ಕಾರ್ಯನಿರ್ವಹಿಸುವುದಿಲ್ಲ. ಸನ್‌ರೂಫ್ ತೆರೆಯಲು ಅಥವಾ ಹೆಡ್‌ಲ್ಯಾಂಪ್‌ಗಳನ್ನು ಆನ್ ಮಾಡಲು ನೀವು ಅವುಗಳನ್ನು ಬಳಸಲು ಪ್ರಯತ್ನಿಸಿದರೆ, ಸಿಸ್ಟಮ್ ಹೆಣಗಾಡುತ್ತದೆ. ಹಲವು ಕಂಟ್ರೋಲ್‌ಗಳು ಈಗ ಟಚ್‌ಸ್ಕ್ರೀನ್ ಆಧಾರಿತವಾಗಿರುವುದರಿಂದ, ಧ್ವನಿ ಸಕ್ರಿಯಗೊಳಿಸುವಿಕೆಯ ಮೂಲಕ ಹೆಚ್ಚಿನ ಫಂಕ್ಷನ್‌ಗಳು ಲಭ್ಯವಿದ್ದರೆ ಅದು ಹೆಚ್ಚು ಅನುಕೂಲಕರವಾಗಿರುತ್ತದೆ.

ಕ್ಯಾಬಿನ್‌ನಲ್ಲಿ ಪ್ರಾಯೋಗಿಕತೆ

ಈಗ, ಕ್ಯಾಬಿನ್ ಪ್ರಾಯೋಗಿಕತೆಯ ಬಗ್ಗೆ ಮಾತನಾಡೋಣ, ಇತರ ಎಸ್‌ಯುವಿಗಳಿಗೆ ಹೋಲಿಸಿದರೆ ವಿಂಡ್ಸರ್ ನಿಜವಾಗಿಯೂ ಉತ್ತಮವಾಗಿರುವ ಪ್ರದೇಶವಾಗಿದೆ. ಸೆಂಟರ್ ಕನ್ಸೋಲ್‌ನಿಂದ ಪ್ರಾರಂಭಿಸಿದಾಗ, ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿ ಹಿಡಿದಿಟ್ಟುಕೊಳ್ಳುವ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ನೀವು ಹೊಂದಿದ್ದೀರಿ. ಬಾಟಲಿಗಳಿಗೆ ಹೊಂದಿಕೊಳ್ಳುವ ಮೂರು ಕಪ್ ಹೋಲ್ಡರ್‌ಗಳು ಸಹ ಇವೆ, ಮತ್ತು ನೀವು ಬಯಸಿದಲ್ಲಿ, ನಿಮ್ಮ ಫೋನ್, ವ್ಯಾಲೆಟ್ ಮತ್ತು ಕೀಗಳಂತಹ ವಸ್ತುಗಳನ್ನು ಹಿಡಿದಿಡಲು ಪರಿಪೂರ್ಣವಾದ ತೆರೆದ ಸ್ಟೋರೇಜ್‌ ಪ್ರದೇಶವನ್ನು ರಚಿಸಲು ನೀವು ವಿಭಾಜಕವನ್ನು ತೆಗೆದುಹಾಕಬಹುದು. ಜೊತೆಗೆ, ಇದರ ರಬ್ಬರ್ ಮ್ಯಾಟಿಂಗ್‌ನಿಂದಾಗಿ ಇದರಲ್ಲಿ ಇಡಲಾದ ವಸ್ತುಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತದೆ ಎಂಬುವುದನ್ನು ಖಚಿತಪಡಿಸುತ್ತದೆ.

ಆರ್ಮ್‌ರೆಸ್ಟ್‌ನ ಕೆಳಗೆ ಆಳವಾದ ಮತ್ತು ವಿಶಾಲವಾದ ಸ್ಟೋರೇಜ್‌ ವಿಭಾಗವಿದೆ.  ಹೆಚ್ಚುವರಿಯಾಗಿ, ಸೆಂಟರ್ ಕನ್ಸೋಲ್ ಅಡಿಯಲ್ಲಿ ಮುಚ್ಚಿದ ಸಂಗ್ರಹಣೆ ಇದೆ, ಇದು ಸಾಕಷ್ಟು ದೊಡ್ಡದಾಗಿದೆ-ಸಣ್ಣ ಸ್ಲಿಂಗ್ ಬ್ಯಾಗ್‌ಗಳು, ಆಹಾರ ಅಥವಾ ನೀರಿನ ಬಾಟಲಿಗಳಿಗೆ ಸೂಕ್ತವಾಗಿದೆ, ಇವೆಲ್ಲವನ್ನೂ ಸೂರ್ಯನ ಬೆಳಕಿನಿಂದ ತಪ್ಪಿಸಿ  ಸುರಕ್ಷಿತವಾಗಿ ಸಂಗ್ರಹಿಸಬಹುದು. ಗ್ಲೋವ್‌ ಬಾಕ್ಸ್‌ ತುಂಬಾ ಆಳವಾಗಿಲ್ಲದಿದ್ದರೂ, ರೆಕಾರ್ಡ್ಸ್‌ ಮತ್ತು ಪೇಪರ್‌ಗಳನ್ನು ಸ್ಟೋರ್‌ ಮಾಡಲು ಸಾಕಷ್ಟು ವಿಶಾಲವಾಗಿದೆ. ಹಾಗೆಯೇ, ಯಾವುದೇ ಶೇಖರಣಾ ಸ್ಥಳಗಳು ತಂಪಾಗಿಲ್ಲ, ಇದು ಸ್ವಲ್ಪ ತೊಂದರೆಯಾಗಿದೆ. ಸಾಮಾನ್ಯವಾಗಿ, ಗ್ಲೋವ್‌ಬಾಕ್ಸ್ ಅಥವಾ ಸೆಂಟರ್ ಸ್ಟೋರೇಜ್ ಅನ್ನು ಕೂಲಿಂಗ್ ಫೀಚರ್‌ಗಳೊಂದಿಗೆ ಅಳವಡಿಸಬಹುದಿತ್ತು.

ಬಾಗಿಲಿನ ಪಾಕೆಟ್‌ಗಳು ಸಹ ಪ್ರಾಯೋಗಿಕವಾಗಿರುತ್ತವೆ, 1-ಲೀಟರ್ ಬಾಟಲ್, ಅರ್ಧ-ಲೀಟರ್ ಬಾಟಲ್ ಮತ್ತು ಸ್ವಲ್ಪ ಇತರವುಗಳಿಗೆ ಹೊಂದಿಕೊಳ್ಳುತ್ತವೆ. ಚಾಲಕ ಮತ್ತು ಪ್ರಯಾಣಿಕರಿಬ್ಬರೂ ಡ್ಯಾಶ್‌ಬೋರ್ಡ್‌ನಲ್ಲಿ ಕಪ್ ಹೋಲ್ಡರ್‌ಗಳನ್ನು  ಹೊಂದಿದ್ದಾರೆ, ಆದರೆ ಇವುಗಳು ವಿಂಡ್‌ಸ್ಕ್ರೀನ್‌ಗೆ ಸಾಕಷ್ಟು ಹತ್ತಿರದಲ್ಲಿವೆ. ಆದ್ದರಿಂದ, ನೀವು ಅಲ್ಲಿ ತಂಪು ಪಾನೀಯವನ್ನು ಇರಿಸಿದರೆ, ಅದು ಬೇಗನೆ ಬೆಚ್ಚಗಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಕ್ಯಾಬಿನ್ ಪ್ರಾಯೋಗಿಕತೆಯ ವಿಷಯದಲ್ಲಿ, ವಿಂಡ್ಸರ್ ಉತ್ತಮವಾಗಿದೆ. ನೀವು ಇರಿಸಬೇಕಾದ ಸ್ಥಳಗಳು ಖಾಲಿಯಾಗುವ ಮೊದಲು ನೀವು ಸಂಗ್ರಹಿಸಲು ಐಟಂಗಳ ಕೊರತೆಯನ್ನು ಎದುರಿಸಬೇಕಾಗುತ್ತದೆ.

ಚಾರ್ಜಿಂಗ್‌ಗಾಗಿ, ಮುಂಭಾಗದ ಪ್ರದೇಶವು ಯುಎಸ್‌ಬಿ ಮತ್ತು ಟೈಪ್-ಸಿ ಪೋರ್ಟ್‌ಗಳನ್ನು ಒಳಗೊಂಡಂತೆ ಸಾಲಿಡ್‌ ಆಯ್ಕೆಗಳನ್ನು ನೀಡುತ್ತದೆ, ಜೊತೆಗೆ ಆರ್ಮ್‌ರೆಸ್ಟ್ ಅಡಿಯಲ್ಲಿ ಶೇಖರಣಾ ವಿಭಾಗದಲ್ಲಿ 12V ಸಾಕೆಟ್ ಇದೆ.

ಫೀಚರ್‌ಗಳು

ಫೀಚರ್‌ಗಳಿಗೆ ಸಂಬಂಧಿಸಿದಂತೆ, ವಿಂಡ್ಸರ್ ಒಂದು ಸ್ಮಾರ್ಟ್ ಕಾರ್ಯನಿರ್ವಹಣೆಯೊಂದಿಗೆ ಸಜ್ಜುಗೊಂಡಿದೆ, ಕೊರತೆಯಿಲ್ಲದೆ ಸಾಕಷ್ಟು ಅನುಕೂಲತೆಯನ್ನು ನೀಡುತ್ತದೆ.  ನೀವು ಕೆಲವು ಉತ್ತಮ ಅನುಭವ ನೀಡುವ ಉತ್ತಮ ಫೀಚರ್‌ಗಳನ್ನು ಸಹ ಕಾಣುವಿರಿ, ಆದರೆ ಕೆಲವು ಪ್ರಮುಖ ಹೈಲೈಟ್ಸ್‌ಗಳು ಕಾಣೆಯಾಗಿವೆ. ವಿಂಡೋ ಕಂಟ್ರೋಲ್‌ಗಳೊಂದಿಗೆ ಪ್ರಾರಂಭಿಸೋಣ. ಎಲ್ಲಾ ನಾಲ್ಕು ವಿಂಡೋಗಳು ಒನ್-ಟಚ್ ಆಪರೇಬಲ್ ಆಗಿರುತ್ತವೆ, ಅಂದರೆ ನೀವು ಅವುಗಳನ್ನು ಒಂದೇ ಸ್ಪರ್ಶದಿಂದ ತೆರೆಯಬಹುದು ಅಥವಾ ಮುಚ್ಚಬಹುದು. ಕಾರು ಆಟೋಮ್ಯಾಟಿಕ್‌ ಹೆಡ್‌ಲ್ಯಾಂಪ್‌ಗಳು, ಆಟೋಮ್ಯಾಟಿಕ್‌ ವೈಪರ್‌ಗಳು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ಗಳನ್ನು ಸಹ ಹೊಂದಿದೆ, ಇದು ಅನುಕೂಲವನ್ನು ಸೇರಿಸುತ್ತದೆ.

ಸುರಕ್ಷತೆ

6 ಏರ್‌ಬ್ಯಾಗ್‌ಗಳು, ಇಎಸ್‌ಪಿ, ಎಬಿಡಿ, ಹಿಲ್-ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಟಿಪಿಎಂಎಸ್ ಮತ್ತು ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳೊಂದಿಗೆ ಸುರಕ್ಷತೆಯನ್ನು ಹೈಲೈಟ್ ಮಾಡಲಾಗಿದೆ.

ಬೂಟ್‌ನ ಸಾಮರ್ಥ್ಯ

ಮತ್ತೊಮ್ಮೆ, ಸಂಪೂರ್ಣ ಇವಿ ಪ್ಲಾಟ್‌ಫಾರ್ಮ್‌ನ ಪ್ರಯೋಜನಗಳು ಕಾರ್ಯರೂಪಕ್ಕೆ ಬರುತ್ತವೆ. ಬೂಟ್ ಸ್ಪೇಸ್‌ಗೆ ಸಂಬಂಧಿಸಿದಂತೆ, ಇದು ಪ್ರಭಾವಶಾಲಿಯಾಗಿ ಆಳವಾಗಿ ಮತ್ತು ಅಗಲವಾಗಿದೆ, ಮೇಲೆ ಯಾವುದೇ ಪಾರ್ಸೆಲ್ ಶೆಲ್ಫ್ ಇಲ್ಲ. ಈ ಬೂಟ್ ಸ್ಪೇಸ್‌ನಲ್ಲಿ, ನೀವು ದೊಡ್ಡ ಸೂಟ್‌ಕೇಸ್‌ಗಳು, ಒಂದರ ಮೇಲೊಂದು ಜೋಡಿಸಲಾದ ಚಿಕ್ಕ ಸೂಟ್‌ಕೇಸ್‌ಗಳು ಅಥವಾ ಬ್ಯಾಗ್‌ಗಳನ್ನು ಆರಾಮವಾಗಿ ಸಂಗ್ರಹಿಸಬಹುದು. ಇದು ಐದು ಜನರ ಲಗೇಜ್‌ಗಳನ್ನು ಇಡಲು ಸಾಕಷ್ಟು ವಿಶಾಲವಾಗಿದೆ, ಲಾಂಗ್‌ ಡ್ರೈವ್‌ಗಳಲ್ಲಿಯೂ ಸಹ-ಇವಿ ಅಂತಹ ದೂರವನ್ನು ಕ್ರಮಿಸಬಹುದೆಂದು ಊಹಿಸಿ. ಹೆಚ್ಚುವರಿಯಾಗಿ, ಬೂಟ್ ಫ್ಲೋರ್ ಅನ್ನು ಸರಿಹೊಂದಿಸಬಹುದು, ಫ್ಲಾಟ್ ಲೋಡಿಂಗ್ ಮೇಲ್ಮೈಯನ್ನು ರಚಿಸಲು ಅದನ್ನು ಹೆಚ್ಚಿಸಲು ಅಥವಾ ಹಿಂಭಾಗದ ಆಸನಗಳನ್ನು ಮಡಚಲು ನಿಮಗೆ ಅನುಮತಿಸುತ್ತದೆ.

ಇದರರ್ಥ ದೊಡ್ಡ ವಸ್ತುಗಳನ್ನು ಸಾಗಿಸುವುದು ಸುಲಭವಾಗುತ್ತದೆ, ಬೂಟ್ ಅನ್ನು ವಿಶಾಲವಾಗಿ ಮಾತ್ರವಲ್ಲದೆ ಹೆಚ್ಚು ಪ್ರಾಯೋಗಿಕವಾಗಿಯೂ ಮಾಡುತ್ತದೆ.

ಕಾರ್ಯಕ್ಷಮತೆ

ಈಗ, ನಾವು ವಿಂಡ್ಸರ್ EV ಯ ಚಾಲನಾ ಅನುಭವದ ಕುರಿತು ತಿಳಿಯೋಣ. ಇದು ಇತರ ಎಲೆಕ್ಟ್ರಿಕ್ ವಾಹನಗಳಂತೆ ಬಹಳ ಊಹಿಸಬಹುದಾದ ಮತ್ತು ಮೃದುವಾಗಿರುತ್ತದೆ. ಥ್ರೊಟಲ್ ಪ್ರತಿಕ್ರಿಯೆಯು ಮೃದುವಾಗಿರುತ್ತದೆ, ಕಾರು ರಸ್ತೆಯ ಮೇಲೆ ಸಲೀಸಾಗಿ ಡ್ರೈವ್‌ ಮಾಡಲು ಅನುವು ಮಾಡಿಕೊಡುತ್ತದೆ. ನಗರದಲ್ಲಾಗಲಿ ಅಥವಾ ಹೆದ್ದಾರಿಯಲ್ಲಾಗಲಿ ಓವರ್‌ಟೇಕ್ ಮಾಡುವುದು ಸಹ ಸುಲಭ, ಏಕೆಂದರೆ ಅಗತ್ಯವಿದ್ದಾಗ ಕಾರು ತ್ವರಿತವಾಗಿ ಪ್ರತಿಕ್ರಿಯಿಸುತ್ತದೆ. ಆದರೆ, ಚಾಲನಾ ಅನುಭವವು ಸುಗಮ ಮತ್ತು ಸುಲಭವಾಗಿದ್ದರೂ, ಇದು ವಿಶೇಷವಾಗಿ ಶಕ್ತಿಯುತ ಅಥವಾ ರೋಮಾಂಚನಕಾರಿಯಾಗಿಲ್ಲ.

ವಿಶೇಷತೆಗಳು ಎಮ್‌ಜಿ ವಿಂಡ್ಸರ್‌ ಇವಿ
ಬ್ಯಾಟರಿ ಪ್ಯಾಕ್‌ 38 ಕಿ.ವ್ಯಾಟ್‌
ಪವರ್‌ 136 ಪಿಎಸ್‌
ಟಾರ್ಕ್‌ 200 ಎನ್‌ಎಮ್‌
ಕ್ಲೈಮ್‌ ಮಾಡಲಾದ ರೇಂಜ್‌ 331 ಕಿ.ಮೀ. 
ನಿರೀಕ್ಷಿತ ರೇಂಜ್‌ 240 ಕಿ.ಮೀ. 

ವರ್ಡಿಕ್ಟ್

ಬ್ಯಾಟರಿ ಬಾಡಿಗೆಯ ವಿಷಯವನ್ನು ಬದಿಗಿಟ್ಟರೆ, ಕಾರು ತನ್ನ ವಿಶಿಷ್ಟ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಎದ್ದು ಕಾಣುತ್ತದೆ. ಕ್ಯಾಬಿನ್ ಕನಿಷ್ಠ ಮತ್ತು ಪ್ರೀಮಿಯಂ ಎರಡೂ ಆಗಿದೆ, ಮತ್ತು ಫೀಚರ್‌ಗಳ ಪಟ್ಟಿಯು ಸಂವೇದನಾಶೀಲ ಮತ್ತು ಸಮಗ್ರವಾಗಿದೆ. ಹೆಚ್ಚುವರಿಯಾಗಿ, ಪ್ರಾಯೋಗಿಕತೆ, ವಿಶಾಲತೆ ಮತ್ತು ಬೂಟ್ ಸಾಮರ್ಥ್ಯವು ಈ ಬೆಲೆಗೆ ಆಕರ್ಷಕವಾಗಿದೆ. ಒಟ್ಟಾರೆಯಾಗಿ, ವಿಂಡ್ಸರ್ ಇವಿ ಒಂದು ಅತ್ಯುತ್ತಮ ಕುಟುಂಬ ಕಾರ್ ಆಗಿದ್ದು ಅದು ನಿರಾಶೆಗೊಳಿಸುವ ಸಾಧ್ಯತೆಯಿಲ್ಲ. ಇದರ ಟಚ್‌ಸ್ಕ್ರೀನ್ ಕಂಟ್ರೋಲ್‌ಗಳು ಸ್ವಲ್ಪಮಟ್ಟಿಗೆ ಒಗ್ಗಿಕೊಳ್ಳುವುದನ್ನು ಅಪೇಕ್ಷಿಸಬಹುದು ಮತ್ತು ನೀವು ರೇಂಜ್‌ ಅನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ, ಈ ಅಂಶಗಳಿಗೆ ನೀವು ಹೊಂದಿಕೊಳ್ಳಬಹುದಾದರೆ, ₹20 ಲಕ್ಷದೊಳಗೆ ಇದಕ್ಕಿಂತ ಉತ್ತಮವಾದ ಫ್ಯಾಮಿಲಿ ಕಾರನ್ನು ಕಂಡುಹಿಡಿಯುವುದು ಕಷ್ಟ.

ಎಂಜಿ ವಿಂಡ್ಸರ್‌ ಇವಿ

ನಾವು ಇಷ್ಟಪಡುವ ವಿಷಯಗಳು

  • ಗುಣಮಟ್ಟದ ಮೆಟಿರಿಯಲ್‌ಗಳು ಮತ್ತು ಫಿನಿಶ್‌ನೊಂದಿಗೆ ಅತ್ಯುತ್ತಮ ಇಂಟಿರಿಯರ್‌ ವಿನ್ಯಾಸ
  • ಪನರೋಮಿಕ್‌ ಗ್ಲಾಸ್‌ ರೂಫ್‌ ಮತ್ತು ಇನ್ಫಿನಿಟಿ-ಟ್ಯೂನ್ಡ್ ಸೌಂಡ್ ಸಿಸ್ಟಮ್ ಸೇರಿದಂತೆ ಫೀಚರ್‌ಗಳೊಂದಿಗೆ ಲೋಡ್ ಮಾಡಲಾಗಿದೆ
  • ಸಾಕಷ್ಟು ಓವರ್‌ಟೇಕಿಂಗ್ ಪವರ್‌ನೊಂದಿಗೆ ಸ್ಮೂತ್ ಡ್ರೈವ್ ಅನುಭವ
View More

ನಾವು ಇಷ್ಟಪಡದ ವಿಷಯಗಳು

  • ನೋಟವು ವಸ್ತುನಿಷ್ಠವಾಗಿರುತ್ತದೆ ಮತ್ತು ಎಲ್ಲರಿಗೂ ಇಷ್ಟವಾಗುವುದಿಲ್ಲ.
  • ಪ್ರಾಕ್ಟಿಕಲ್‌ ರೇಂಜ್‌ ಸುಮಾರು 240 ಕಿಮೀ, ಇದು ಈ ಗಾತ್ರದ ಕಾರಿಗೆ ಸಾಕಾಗುವುದಿಲ್ಲ.
  • ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಸೆಟಪ್ ಮಾಡಲು ತುಂಬಾ ಚಿಕ್ಕದಾಗಿದೆ.
View More

ಎಂಜಿ ವಿಂಡ್ಸರ್‌ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • MG ಕಾಮೆಟ್:  1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶೆ
    MG ಕಾಮೆಟ್: 1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶೆ

    MG ಕಾಮೆಟ್ ನಗರದ ಟ್ರಾಫಿಕ್‌ ಮತ್ತು ದಟ್ಟಣೆಗೆ ಉತ್ತಮ ಪರಿಹಾರವಾಗಿದೆ, ಆದರೆ ಇದರಲ್ಲೂ ಕೆಲವು ನ್ಯೂನತೆಗಳಿವೆ

    By ujjawallMay 20, 2024
  • MG Comet EV: ಲಾಂಗ್‌-ಟರ್ಮ್‌ ಫ್ಲೀಟ್ ಪರಿಚಯ
    MG Comet EV: ಲಾಂಗ್‌-ಟರ್ಮ್‌ ಫ್ಲೀಟ್ ಪರಿಚಯ

    MG ಯ ಚಮತ್ಕಾರಿ ಪುಟ್ಟ ಕಾಮೆಟ್ EV ಪುಣೆಯ ಜನದಟ್ಟನೆ ಟ್ರಾಫಿಕ್‌ಗಳಲ್ಲಿ ಮತ್ತು ಸುತ್ತಮುತ್ತಲಿನ ಡ್ರೈವ್‌ಗಳಿಗೆ ಜೀವ ತುಂಬುತ್ತದೆ. 

    By ujjawallMar 26, 2024

ಎಂಜಿ ವಿಂಡ್ಸರ್‌ ಇವಿ ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ45 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • ಎಲ್ಲಾ 45
  • Looks 18
  • Comfort 12
  • Mileage 2
  • Interior 12
  • Space 5
  • Price 14
  • Power 3
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • D
    dhruv patel on Oct 17, 2024
    4.8
    Yes It Is One Of
    Yes it is one of the best budget ev cars in the market. i like the space and comfort of the car the most .looks are subjective but are good.
    ಮತ್ತಷ್ಟು ಓದು
    Was th IS review helpful?
    ಹೌದುno
  • B
    bhushan mhatre on Oct 13, 2024
    4.8
    Windsor EV , A Great Car By Mg
    Mg windsor is a great car for the family and especially for city use.It is rich with features,connected car tech and its premium quality.Everything inside the car gives a feel of a premium upper class car.The claimed range is good enough for city travel.
    ಮತ್ತಷ್ಟು ಓದು
    Was th IS review helpful?
    ಹೌದುno
  • V
    vinayak on Oct 11, 2024
    4.7
    About Mg Windsor Ev Windsor Ev Features
    Nice looking car with features loaded, according to looking and pricing of this car is amazing, and the range is nice and it's born ev car MG done great work.
    ಮತ್ತಷ್ಟು ಓದು
    Was th IS review helpful?
    ಹೌದುno
  • A
    arif arif on Oct 07, 2024
    3.5
    Good, Bir Can Make It
    Good, bir can make it better for the mileage and performance I prefer to modify it. It looks better after modifying it is the best thing in the car is interior
    ಮತ್ತಷ್ಟು ಓದು
    Was th IS review helpful?
    ಹೌದುno
  • A
    ashutosh nerkar on Oct 05, 2024
    5
    Superb Car In This Price
    Superb car in this price range. Very luxurious and spaciousnesses. Interior and too many utilities are provided. Top class features in this price range. Very unique features are given. All the models are beyond comparable.
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ವಿಂಡ್ಸರ್‌ ಇವಿ ವಿರ್ಮಶೆಗಳು ವೀಕ್ಷಿಸಿ

ಎಂಜಿ ವಿಂಡ್ಸರ್‌ ಇವಿ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌331 km

ಎಂಜಿ ವಿಂಡ್ಸರ್‌ ಇವಿ ಬಣ್ಣಗಳು

ಎಂಜಿ ವಿಂಡ್ಸರ್‌ ಇವಿ ಚಿತ್ರಗಳು

  • MG Windsor EV Front Left Side Image
  • MG Windsor EV Side View (Left)  Image
  • MG Windsor EV Grille Image
  • MG Windsor EV Headlight Image
  • MG Windsor EV Taillight Image
  • MG Windsor EV Door Handle Image
  • MG Windsor EV Wheel Image
  • MG Windsor EV Exterior Image Image
space Image
space Image

ಪ್ರಶ್ನೆಗಳು & ಉತ್ತರಗಳು

Akshaya asked on 15 Sep 2024
Q ) What is the lunch date of Windsor EV
By CarDekho Experts on 15 Sep 2024

A ) MG Motor Windsor EV has already been launched and is available for purchase in I...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Shailesh asked on 14 Sep 2024
Q ) What is the range of MG Motor Windsor EV?
By CarDekho Experts on 14 Sep 2024

A ) MG Windsor EV range is 331 km per full charge. This is the claimed ARAI mileage ...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.32,353Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಎಂಜಿ ವಿಂಡ್ಸರ್‌ ಇವಿ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.14.76 - 16.94 ಲಕ್ಷ
ಮುಂಬೈRs.14.22 - 16.32 ಲಕ್ಷ
ತಳ್ಳುRs.14.22 - 16.32 ಲಕ್ಷ
ಹೈದರಾಬಾದ್Rs.16.41 - 18.81 ಲಕ್ಷ
ಚೆನ್ನೈRs.14.22 - 16.32 ಲಕ್ಷ
ಅಹ್ಮದಾಬಾದ್Rs.15.14 - 17.35 ಲಕ್ಷ
ಲಕ್ನೋRs.14.22 - 16.32 ಲಕ್ಷ
ಜೈಪುರRs.14.22 - 16.32 ಲಕ್ಷ
ಪಾಟ್ನಾRs.14.22 - 16.32 ಲಕ್ಷ
ಚಂಡೀಗಡ್Rs.14.22 - 16.32 ಲಕ್ಷ

ಟ್ರೆಂಡಿಂಗ್ ಎಂಜಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಅಕ್ಟೋಬರ್ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience